स्वातंत्र्याच्या ८० वर्षांनंतर अखेर गणेबैल भागात बस सेवा सुरू: दलित संघर्ष समितीच्या लढ्याचा मोठा विजय! ಸ್ವಾತಂತ್ರ್ಯ ಸಿಕ್ಕು ೮೦ ವರ್ಷಗಳ ಬಳಿಕ ಕೊನೆಗೂ ಗಣೇಬೈಲ ಭಾಗಕ್ಕೆ ಬಸ್ ಸಂಚಾರ ಆರಂಭ:
खानापूर (प्रतिनिधी):
तालुक्यातील गणेबैल , हतरगुंजी, मुडेवाडी आणि डूक्करवाडी या गावांना बस सेवेने जोडण्याचे अनेक दशकांपासूनचे स्वप्न अखेर साकार झाले आहे. स्वातंत्र्याची ८० वर्षे उलटूनही या गावांमध्ये बस सेवा उपलब्ध नव्हती. मात्र, ‘कर्नाटक राज्य दलित संघर्ष समिती’ने (समन्वय संस्था) खानापूर परिवहन महामंडळाच्या आगार व्यवस्थापकांकडे केलेल्या विनंतीला त्वरित प्रतिसाद मिळाला आणि आज अधिकृतपणे बस सेवा सुरू करण्यात आली.
.
ग्रामस्थ आणि विद्यार्थ्यांकडून फटाके फोडून व पेढे वाटून आनंदोत्सव
परिवहन महामंडळाची बस पहिल्यांदाच गावात दाखल होताच ग्रामस्थ तसेच शालेय आणि महाविद्यालयीन विद्यार्थ्यांचा आनंद गगनात मावेनासा झाला. अनेक दशकांपासूनच्या समस्येवर तोडगा निघाल्याने नागरिकांनी फटाके फोडून आणि एकमेकांना पेढे भरवून आनंद साजरा केला. बस सेवा नसल्यामुळे दररोज कित्येक किलोमीटर पायी चालणाऱ्या शालेय विद्यार्थ्यांसाठी हा निर्णय अत्यंत दिलासादायक ठरला आहे.
आगार व्यवस्थापक आणि दलित संघर्ष समिती नेत्यांचा भव्य सत्कार!
लोकांच्या समस्या ऐकून घेऊन त्वरित बस सेवेची व्यवस्था करणारे खानापूर आगार व्यवस्थापक संतोष बेनकनकोप्पा आणि या लढ्यात आघाडीवर असलेले दलित संघर्ष समितीचे जिल्हा सरचिटणीस राजशेखर हिंडलगी व राघवेंद्र चलवादी यांचा गणेबैल व परिसरातील ग्रामस्थांनी शाल व पुष्पहार देऊन कृतज्ञतापूर्वक भव्य सत्कार केला.
मान्यवरांच्या उपस्थितीत कार्यक्रम
या ऐतिहासिक क्षणी ग्रामपंचायत सदस्य रवी मादार, उपाध्यक्ष उज्वला कुंभार, नेते बसवराज मादार, शशीधर नायक, परशुराम अलोलकर, राजाराम अलोलकर, मोहन गुरव, विजय गुरव, बैरू कुंभार, दोंडिबा कुंभार, संजय कुंभार, कल्लाप्पा कुंभार यांच्यासह हलकर्णी ग्रामपंचायतीचे कर्मचारी, चारही गावांतील ज्येष्ठ नागरिक, महिला आणि शेकडो शालेय विद्यार्थी उपस्थित होते; त्यांनी या कार्यक्रमाला यशस्वी केले.
ಸ್ವಾತಂತ್ರ್ಯ ಸಿಕ್ಕು ೮೦ ವರ್ಷಗಳ ಬಳಿಕ ಕೊನೆಗೂ ಗಣೇಬೈಲ ಭಾಗಕ್ಕೆ ಬಸ್ ಸಂಚಾರ ಆರಂಭ: ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಭರ್ಜರಿ ಜಯ!
ಖಾನಾಪುರ (ಪ್ರತಿನಿಧಿ):
ತಾಲೂಕಿನ ಗಣೇಬೈಲ, ಹತ್ತರಗುಂಜಿ, ಮುಡೇವಾಡಿ ಮತ್ತು ಢುಖರವಾಡಿ ಗ್ರಾಮಗಳ ದಶಕಗಳ ಬಸ್ ಸಂಪರ್ಕದ ಕನಸು ಕೊನೆಗೂ ನನಸಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಬರೋಬ್ಬರಿ ೮೦ ವರ್ಷಗಳು ಕಳೆದರೂ ಈ ಗ್ರಾಮಗಳಿಗೆ ಬಸ್ ಸಂಚಾರ ವ್ಯವಸ್ಥೆ ಇರಲಿಲ್ಲ. ಆದರೆ, ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಂಯೋಜಕ ಸಂಘಟನೆ) ವತಿಯಿಂದ ಖಾನಾಪುರ ಸಾರಿಗೆ ಸಂಸ್ಥೆಯ ಡಿಪೋ ವ್ಯವಸ್ಥಾಪಕರಿಗೆ ಸಲ್ಲಿಕೆಯಾಗಿದ್ದ ಮನವಿಗೆ ತಕ್ಷಣ ಸ್ಪಂದನೆ ಸಿಕ್ಕಿದ್ದು, ಇಂದು ಅಧಿಕೃತವಾಗಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ.ಪಟಾಕಿ ಸಿಡಿಸಿ, ಸಿಹಿ ಹಂಚಿ ಗ್ರಾಮಸ್ಥರ-ವಿದ್ಯಾರ್ಥಿಗಳ ಸಂಭ್ರಮಾಚರಣೆಗ್ರಾಮಕ್ಕೆ ಪ್ರಪ್ರಥಮ ಬಾರಿಗೆ ಸಾರಿಗೆ ಸಂಸ್ಥೆಯ ಬಸ್ ಆಗಮಿಸುತ್ತಿದ್ದಂತೆಯೇ
ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಆನಂದಕ್ಕೆ ಪಾರವೇ ಇರಲಿಲ್ಲ. ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕ ಖುಷಿಯಲ್ಲಿ ಸಾರ್ವಜನಿಕರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಭರ್ಜರಿಯಾಗಿ ಸಂಭ್ರಮಿಸಿದರು. ಬಸ್ ಸಂಚಾರವಿಲ್ಲದೆ ನಿತ್ಯ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ವಿದ್ಯಾರ್ಥಿಗಳಿಗೆ ಈ ನಿರ್ಧಾರದಿಂದ ಭಾರಿ ಅನುಕೂಲವಾಗಿದೆ.ಡಿಪೋ ಮ್ಯಾನೇಜರ್ ಹಾಗೂ ದಸಂಸ ಮುಖಂಡರಿಗೆ ಅದ್ಧೂರಿ ಸತ್ಕಾರಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ತಕ್ಷಣವೇ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟ ಖಾನಾಪುರ ಡಿಪೋ ಮ್ಯಾನೇಜರ್ ಸಂತೋಷ್ ಬೆನಕನಕೊಪ್ಪ ಹಾಗೂ ಈ ಹೋರಾಟದ ಮುಂಚೂಣಿಯಲ್ಲಿದ್ದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ್ ಹಿಂಡಲಗಿ ಮತ್ತು ರಾಘವೇಂದ್ರ ಚಲವಾದಿ ಅವರಿಗೆ ಗಣೇಬೈಲ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ವತಿಯಿಂದ ಶಾಲು ಹೊದಿಸಿ, ಹೂಮಾಲೆ ಹಾಕಿ ಅತ್ಯಂತ ಕೃತಜ್ಞತೆಯಿಂದ ಅದ್ಧೂರಿಯಾಗಿ ಸತ್ಕರಿಸಲಾಯಿತು.
ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ.
ಈ ಐತಿಹಾಸಿಕ ಕ್ಷಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರವಿ ಮಾದರ, ಉಪಾಧ್ಯಕ್ಷೆ ಉಜ್ವಲಾ ಕುಂಬಾರ, ಮುಖಂಡರಾದ ಬಸವರಾಜ ಮಾದರ, ಶಶಿಧರ ನಾಯಕ, ಪರಶುರಾಮ ಆಲೋಲಕರ, ರಾಜಾರಾಮ್ ಆಲೋಲಕರ, ಮೋಹನ್ ಗುರವ್, ವಿಜಯ್ ಗುರವ್, ಬೈರೂ ಕುಂಬಾರ, ದೊಂಡಿಬಾ ಕುಂಬಾರ, ಸಂಜಯ್ ಕುಂಬಾರ, ಕಲ್ಲಪ್ಪ ಕುಂಬಾರ ಸೇರಿದಂತೆ ಹಲಕರ್ಣಿ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು, ನಾಲ್ಕೂ ಗ್ರಾಮಗಳ ಹಿರಿಯರು, ಮಹಿಳೆಯರು ಮತ್ತು ನೂರಾರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.