खानापूर लाईव्ह न्युज /प्रतिनिधी:
शिरशी तालुक्यातील अर्नाळी गावामध्ये अनधिकृत रित्यात सागवान सह विविध जातीची झाडे तोडून साठा केलेल्या व्यक्तीच्या निवासस्थानावर झाड टाकून एका अटक करण्यात आली आहे. याप्रकरणी दादा पीर करीम साहब शिकलगार यांना अटक करण्यात आली आहे. याप्रकरणी वन विभागाचे वर संरक्षणाधिकारी डॉक्टर अजय जीआर सहाय्यक संरक्षणाधिकारी एस एस निंगाणी त्यांच्या नेतृत्वाखाली श्रीमती भव्य नायक, वलय अधिकारी गिरीश नायक, विभागीय वन अधिकारी, शिरसी झोन, शिरसी यांच्या नेतृत्वाखाली संयुक्त मोहीम राबवून आरोपीकडून महिंद्रा वाहन तसेच सागवान, बीट , किंदल अशा विविध प्रकारच्या जातीच्या झाडांचे कापलेले 94 नग, तसेच लाकूड कापणाऱ्या मशिनी, यंत्रे जप्त केले आहेत. आरोपी दादापीर खरीमसाब शिकलागर सा || नारायणगुरु नगर, चिपगी, शिरसी यांनी त्याला अटक करून सक्षम न्यायालयात हजर केले आहे. रवींद्र एस कर्नल, उप झोनल वन अधिकारी, एककांबी शाखे, राजेश कोटारकर, उप झोनल वन अधिकारी, संतोष कुरुबर, उप झोनल वन अधिकारी, उंचल्ली, श्री मलतेश बर्की, उप झोनल वन अधिकारी, कार्तिक नार्वेकर. , उपविभागीय वन अधिकारी व वन गस्ती पालक मलतेश एसके , मंजू शिगली , भोजू चौभान ,अमृता अरिबेंची , सिद्धू बिरादार व चालक अस्लम , मंजुनाथ नायका , ताजुद्दीन डंबलकर व कर्मचारी उपस्थित होते. या प्रकरणाचा तपास सुरू ठेवला आहे.
ದಿನಾಂಕ 04.10.2024 ರಂದು ಶಿರಸಿ ತಾಲೂಕು ಆದ್ನಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಸಾಗವಾನಿ ಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡಿ ಚಿಪಗಿಯ ನಿವಾಸಿಯಾದ ದಾದಾಪೀರ್ ಖರೀಮ್ ಸಾಬ್ ಶಿಕಲಗಾರ್, ಈತನು ತನ್ನ ಮನೆಯಲ್ಲಿ ದಾಸ್ತಾನು ಇಟ್ಟಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿರಸಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಡಾ|| ಅಜ್ಜಯ್ಯ ಜಿ ಆರ್, ಭಾ.ಅ.ಸೇ, ಮತ್ತು ಶ್ರೀ ಎಸ್ ಎಸ್ ನಿಂಗಾಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿರಸಿ ಉಪ ವಿಭಾಗ, ಶಿರಸಿ ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಭವ್ಯಾ ನಾಯ್ಕ, ವಲಯ ಅರಣ್ಯಾಧಿಕಾರಿ, ಬನವಾಸಿ ವಲಯ, ಬನವಾಸಿ ಮತ್ತು ಶ್ರೀ ಗಿರೀಶ ನಾಯ್ಕ, ವಲಯ ಅರಣ್ಯಾಧಿಕಾರಿ, ಶಿರಸಿ ವಲಯ, ಶಿರಸಿ ಇವರ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸ್ಥಳ ಪರಿಶೀಲಿಸಿ ಕೃತ್ಯಕ್ಕೆ ಬಳಸಿದ Mahindra Jeetoplus-23, Gasolin ವಾಹನ ಹಾಗೂ ಸಾಗವಾನಿ, ಬೀಟೆ, ಕಿಂದಳ, ನಂದಿ, ಹೆಬ್ಬಲಸು, ಅಕೇಶಿಯಾ ಹಾಗೂ ಹೊನ್ನೆ ಜಾತಿಯ 94 ಕೊರೆದ ನಾಟುಗಳು 1.623 ಘ.ಮೀ ಮತ್ತು Planing (gauge) Machine-1, Table Machine-1, 2 HP Motors-2 ಜಪ್ತಿಪಡಿಸಿ ಆರೋಪಿತನಾದ ದಾದಾಪೀರ್ ಖರೀಮ್ ಸಾಬ್ ಶಿಕಲಗಾರ್ ಸಾ|| ನಾರಾಯಣಗುರು ನಗರ, ಚಿಪಗಿ, ಪೋ|| ಚಿಪಗಿ, ತಾ|| ಶಿರಸಿ ಇವರನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ಇರುತ್ತದೆ. ಸದರಿ ಕಾರ್ಯಾಚರಣೆಯಲ್ಲಿ ಶ್ರೀ ರವೀಂದ್ರ ಎಸ್ ಕರ್ನಲ್, ಉಪ ವಲಯ ಅರಣ್ಯಾಧಿಕಾರಿ, ಎಕ್ಕಂಬಿ ಶಾಖೆ, ಶ್ರೀ ರಾಜೇಶ ಕೊಟಾರಕರ್, ಉಪ ವಲಯ ಅರಣ್ಯಾಧಿಕಾರಿ, ಶ್ರೀ ಸಂತೋಷ ಕುರುಬರ್, ಉಪ ವಲಯ ಅರಣ್ಯಾಧಿಕಾರಿ, ಉಂಚಳ್ಳಿ, ಶ್ರೀ ಮಾಲತೇಶ ಬಾರ್ಕಿ, ಉಪ ವಲಯ ಅರಣ್ಯಾಧಿಕಾರಿ, ಶ್ರೀ ಕಾರ್ತಿಕ ನಾರ್ವೆಕರ್, ಉಪ ವಲಯ ಅರಣ್ಯಾಧಿಕಾರಿ ಹಾಗೂ ಗಸ್ತು ಅರಣ್ಯ ಪಾಲಕರಾದ ಶ್ರೀ ಮಾಲತೇಶ್ ಎಸ್ ಕೆ, ಶ್ರೀ ಮಂಜು ಶಿಗ್ಲಿ, ಶ್ರೀ ಭೋಜು ಚೌವ್ಹಾಣ, ಶ್ರೀ ಅಮೃತ ಅರಿಬೆಂಚಿ, ಶ್ರೀ ಸಿದ್ದು ಬಿರಾದರ್ ಹಾಗೂ ವಾಹನ ಚಾಲಕರಾದ ಅಸ್ಲಾಂ, ಮಂಜುನಾಥ್ ನಾಯ್ಕ, ತಾಜುದಿನ್ ಡಂಬಳಕರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸದರಿ ಪ್ರಕರಣದ ತನಿಖೆ ಮುಂದುವರೆದಿರುತ್ತದೆ.