खानापूर तालुका दुष्काळाच्या उंबरठ्यार
ಖಾನಾಪುರ ತಾಲೂಕು ಬರದ ಅಂಚಿನಲ್ಲಿ!ಬರ ಘೋಷಣೆಗೆ ಮುನ್ನ ‘ಗ್ರೌಂಡ್ ಟ್ರೂಥಿಂಗ್’; ರಾಜ್ಯ ಸರ್ಕಾರದ 9 ತಾಲೂಕುಗಳ ಪಟ್ಟಿಯಲ್ಲಿ ಖಾನಾಪುರ👉
खानापूर तालुका दुष्काळाच्या उंबरठ्यावर!
दुष्काळग्रस्त घोषित करण्यापूर्वी ‘ग्राउंड ट्रुथिंग’; कर्नाटक सरकारच्या यादीत खानापूरचा समावेश
खानापूर, दि. ८ ऑक्टोबर : खानापूर तालुक्यातील शेतकऱ्यांसाठी महत्त्वाची बातमी समोर आली आहे. कर्नाटक राज्य आपत्ती व्यवस्थापन प्राधिकरणाने (KSDMA) दुष्काळ व्यवस्थापन नियमावली-२०२० अंतर्गत खानापूर तालुक्याचा समावेश दुष्काळाच्या ‘ग्राउंड ट्रुथिंग’साठी पात्र ठरलेल्या अतिरिक्त ९ तालुक्यांच्या यादीत केला आहे. त्यामुळे खानापूर तालुका दुष्काळग्रस्त घोषित होण्याच्या दिशेने महत्त्वाचे पाऊल पडले आहे.
कर्नाटक सरकारच्या महसूल विभागांतर्गत कर्नाटक राज्य आपत्ती व्यवस्थापन प्राधिकरणाने ८ ऑक्टोबर २०२६ रोजी अधिसूचना क्रमांक CKSDMA-DMA0ETC/198/2026-AD जारी केली आहे. या अधिसूचनेत राज्यातील पाच जिल्ह्यांमधील अतिरिक्त नऊ तालुक्यांना दुष्काळाच्या निकषांनुसार प्रत्यक्ष पाहणी अर्थात ‘Ground Truthing’ करण्याचे निर्देश देण्यात आले आहेत.
खानापूरचा ‘मध्यम दुष्काळ’ श्रेणीत समावेश
अधिसूचनेच्या Annexure-1 मध्ये बेळगाव जिल्ह्यातील खानापूर तालुक्याचा स्पष्टपणे समावेश करण्यात आला असून, एकात्मिक दुष्काळ मूल्यांकनानुसार खानापूरची स्थिती ‘Moderate’ (मध्यम) अशी नोंदविण्यात आली आहे.
या यादीत खानापूरसह शिवमोग्गा जिल्ह्यातील होसनगरा व सागर, हासन जिल्ह्यातील साकलेशपूर, दक्षिण कन्नड जिल्ह्यातील पुत्तूर, मूडबिद्री व मुल्की तसेच उत्तर कन्नड जिल्ह्यातील सुपा व दांडेली या नऊ तालुक्यांचा समावेश आहे.
प्रत्यक्ष शेतपातळीवर होणार पाहणी
दुष्काळ व्यवस्थापन नियमावलीनुसार खानापूरसह या नऊ तालुक्यांमध्ये आता प्रत्यक्ष शेतपातळीवर पिकांचे नुकसान व दुष्काळाची तीव्रता तपासण्यासाठी ग्राउंड ट्रुथिंग करण्यात येणार आहे.
या प्रक्रियेत पिकांचे नुकसान, जिओ-टॅग केलेले छायाचित्रे, GPS लोकेशन, जमीन व पिकांची माहिती तसेच नुकसानाचे प्रमाण यांची नोंद केली जाणार आहे. यासाठी ‘Crop Loss GT’ मोबाईल ॲप्लिकेशनचा वापर करण्यात येणार आहे.
३३ टक्के नुकसान आढळल्यास दुष्काळासाठी पात्रता
अधिसूचनेनुसार ग्राउंड ट्रुथिंगमध्ये पीक नुकसान ३३ टक्के किंवा त्यापेक्षा अधिक आढळल्यास संबंधित तालुका दुष्काळग्रस्त घोषित करण्यासाठी पात्र ठरू शकतो. नुकसान ५० टक्क्यांपेक्षा अधिक असल्यास दुष्काळाची तीव्रता ‘गंभीर’ ठरविण्याची तरतूद आहे.
ग्राउंड ट्रुथिंगच्या ८० टक्के किंवा त्याहून अधिक निरीक्षणांमध्ये ५० टक्क्यांपेक्षा जास्त पीक नुकसान आढळल्यास दुष्काळाची तीव्रता ‘मध्यम’वरून ‘गंभीर’ करण्याचा अधिकार राज्य सरकारला आहे.
१२ ऑक्टोबरपर्यंत प्रक्रिया पूर्ण करण्याचे निर्देश
अधिसूचनेनुसार ८ ऑक्टोबर रोजी पिकांची निवड, ग्राउंड ट्रुथिंग पथकांची स्थापना व गावांचे रँडमायझेशन, त्यानंतर ९ व १० ऑक्टोबरला प्रत्यक्ष पाहणी आणि १२ ऑक्टोबरपर्यंत प्रक्रिया पूर्ण करण्याचे वेळापत्रक निश्चित करण्यात आले आहे.
त्यामुळे खानापूर तालुक्यातील शेतकऱ्यांचे लक्ष आता या ग्राउंड ट्रुथिंगकडे लागले आहे. प्रत्यक्ष पाहणीत पिकांचे नुकसान निर्धारित निकषांनुसार आढळल्यास खानापूर तालुका अधिकृतपणे दुष्काळग्रस्त घोषित होण्याचा मार्ग मोकळा होऊ शकतो.
शेतकऱ्यांच्या अपेक्षा वाढल्या
यंदाच्या पावसाळ्यातील अनियमित पाऊस, पिकांचे नुकसान आणि शेतीसमोरील अडचणींच्या पार्श्वभूमीवर खानापूर तालुका दुष्काळग्रस्त घोषित करण्याची मागणी होत होती. आता शासनाच्या अधिकृत यादीत खानापूरचा समावेश झाल्याने शेतकऱ्यांना दुष्काळी मदत, सवलती आणि शासनाच्या संबंधित उपाययोजनांचा लाभ मिळण्याच्या आशा वाढल्या आहेत.
ಖಾನಾಪುರ ತಾಲೂಕು ಬರದ ಅಂಚಿನಲ್ಲಿ!
ಬರ ಘೋಷಣೆಗೆ ಮುನ್ನ ‘ಗ್ರೌಂಡ್ ಟ್ರೂಥಿಂಗ್’; ರಾಜ್ಯ ಸರ್ಕಾರದ 9 ತಾಲೂಕುಗಳ ಪಟ್ಟಿಯಲ್ಲಿ ಖಾನಾಪುರ
ಖಾನಾಪುರ, ಅ.8: ಖಾನಾಪುರ ತಾಲೂಕಿನ ರೈತರಿಗೆ ಮಹತ್ವದ ಬೆಳವಣಿಗೆಯೊಂದು ಹೊರಬಿದ್ದಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಬರ ನಿರ್ವಹಣಾ ಕೈಪಿಡಿ–2020ರ ಅನ್ವಯ ಖಾನಾಪುರ ತಾಲೂಕನ್ನು ಹೆಚ್ಚುವರಿ 9 ತಾಲೂಕುಗಳ ‘ಗ್ರೌಂಡ್ ಟ್ರೂಥಿಂಗ್’ ಪರಿಶೀಲನೆಗೆ ಅರ್ಹವೆಂದು ಗುರುತಿಸಿದೆ. ಇದರಿಂದ ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸುವ ಪ್ರಕ್ರಿಯೆಗೆ ಮತ್ತಷ್ಟು ಬಲ ಬಂದಿದೆ.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅ.8, 2026ರಂದು ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಐದು ಜಿಲ್ಲೆಗಳ 9 ತಾಲೂಕುಗಳಲ್ಲಿ ಬರ ಪರಿಸ್ಥಿತಿಯ ಕುರಿತು ಸ್ಥಳ ಪರಿಶೀಲನೆ ನಡೆಸಲು ಸೂಚಿಸಿದೆ.
ಅಧಿಸೂಚನೆಯ Annexure-1ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಸ್ಪಷ್ಟವಾಗಿ ಸೇರ್ಪಡೆಯಾಗಿದ್ದು, ಸಮಗ್ರ ಬರ ಮೌಲ್ಯಮಾಪನದಲ್ಲಿ ಖಾನಾಪುರವನ್ನು ‘Moderate’ (ಮಧ್ಯಮ) ಬರ ಪರಿಸ್ಥಿತಿ ಎಂದು ಗುರುತಿಸಲಾಗಿದೆ.
9 ತಾಲೂಕುಗಳ ಪಟ್ಟಿಯಲ್ಲಿ ಖಾನಾಪುರ
ಖಾನಾಪುರದ ಜೊತೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ, ಹಾಸನ ಜಿಲ್ಲೆಯ ಸಕಲೇಶಪುರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಡುಬಿದಿರೆ ಮತ್ತು ಮುಲ್ಕಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸೂಪಾ ಮತ್ತು ದಾಂಡೇಲಿ ತಾಲೂಕುಗಳು ಗ್ರೌಂಡ್ ಟ್ರೂಥಿಂಗ್‌ಗೆ ಆಯ್ಕೆಯಾಗಿವೆ.
ಇನ್ನು ನಡೆಯಲಿದೆ ನೈಜ ಸ್ಥಳ ಪರಿಶೀಲನೆ
ಬರ ನಿರ್ವಹಣಾ ಕೈಪಿಡಿ–2020ರ ಮಾನದಂಡಗಳ ಪ್ರಕಾರ ಖಾನಾಪುರ ಸೇರಿದಂತೆ 9 ತಾಲೂಕುಗಳಲ್ಲಿ ರೈತರ ಜಮೀನುಗಳಿಗೆ ತೆರಳಿ ಬೆಳೆ ನಷ್ಟದ ಪ್ರಮಾಣ ಹಾಗೂ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ.
ಈ ಸಂದರ್ಭದಲ್ಲಿ ಬೆಳೆ ಹಾನಿ, ಜಿಯೋ-ಟ್ಯಾಗ್ ಛಾಯಾಚಿತ್ರಗಳು, GPS ಸ್ಥಳ ಮಾಹಿತಿ, ಜಮೀನು ಮತ್ತು ಬೆಳೆ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದಕ್ಕಾಗಿ ‘Crop Loss GT’ ಮೊಬೈಲ್ ಅಪ್ಲಿಕೇಶನ್ ಬಳಸಲಾಗುತ್ತದೆ.
33%ಕ್ಕಿಂತ ಹೆಚ್ಚು ಬೆಳೆ ನಷ್ಟವಾದರೆ ಬರ ಘೋಷಣೆಗೆ ಅರ್ಹತೆ
ಅಧಿಸೂಚನೆಯ ಪ್ರಕಾರ ಗ್ರೌಂಡ್ ಟ್ರೂಥಿಂಗ್‌ನಲ್ಲಿ 33% ಅಥವಾ ಅದಕ್ಕಿಂತ ಹೆಚ್ಚು ಬೆಳೆ ನಷ್ಟ ಕಂಡುಬಂದರೆ ಸಂಬಂಧಪಟ್ಟ ತಾಲೂಕು ಬರಪೀಡಿತ ಎಂದು ಘೋಷಿಸಲು ಅರ್ಹವಾಗುತ್ತದೆ. 50%ಕ್ಕಿಂತ ಹೆಚ್ಚು ಬೆಳೆ ನಷ್ಟ ಕಂಡುಬಂದಲ್ಲಿ ಬರದ ತೀವ್ರತೆಯನ್ನು ‘Severe’ (ತೀವ್ರ) ಎಂದು ಪರಿಗಣಿಸುವ ಅವಕಾಶವಿದೆ.
ಇನ್ನು ಗ್ರೌಂಡ್ ಟ್ರೂಥಿಂಗ್‌ನ ಶೇ.80 ಅಥವಾ ಅದಕ್ಕಿಂತ ಹೆಚ್ಚಿನ ಪರಿಶೀಲನೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಕಂಡುಬಂದರೆ, ಬರದ ತೀವ್ರತೆಯನ್ನು ‘Moderate’ನಿಂದ ‘Severe’ಗೆ ಹೆಚ್ಚಿಸುವ ಅಧಿಕಾರ ಸರ್ಕಾರಕ್ಕಿದೆ.
ಅ.12ರೊಳಗೆ ಪರಿಶೀಲನೆ ಪೂರ್ಣಗೊಳಿಸಲು ಸೂಚನೆ
ಅಧಿಸೂಚನೆಯ ವೇಳಾಪಟ್ಟಿಯಂತೆ ಅ.8ರಂದು ಬೆಳೆಗಳ ಆಯ್ಕೆ, ಗ್ರೌಂಡ್ ಟ್ರೂಥಿಂಗ್ ತಂಡಗಳ ರಚನೆ ಮತ್ತು ಗ್ರಾಮಗಳ ರ್ಯಾಂಡಮೈಜೇಶನ್, ಅ.9 ಮತ್ತು 10ರಂದು ಸ್ಥಳ ಪರಿಶೀಲನೆ ಹಾಗೂ ಅ.12ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಹೀಗಾಗಿ ಖಾನಾಪುರ ತಾಲೂಕಿನ ರೈತರ ಗಮನ ಇದೀಗ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆಯತ್ತ ನೆಟ್ಟಿದೆ. ಸ್ಥಳ ಪರಿಶೀಲನೆಯಲ್ಲಿ ನಿಗದಿತ ಮಾನದಂಡದಂತೆ ಬೆಳೆ ನಷ್ಟ ದೃಢಪಟ್ಟರೆ ಖಾನಾಪುರ ತಾಲೂಕು ಅಧಿಕೃತವಾಗಿ ಬರಪೀಡಿತ ತಾಲೂಕು ಎಂದು ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ರೈತರಲ್ಲಿ ಹೆಚ್ಚಿದ ನಿರೀಕ್ಷೆ
ಅನಿಯಮಿತ ಮಳೆ, ಬೆಳೆ ಹಾನಿ ಹಾಗೂ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂಬ ಬೇಡಿಕೆ ಕೇಳಿಬರುತ್ತಿತ್ತು. ಇದೀಗ ಸರ್ಕಾರದ ಅಧಿಕೃತ ಅಧಿಸೂಚನೆಯಲ್ಲಿ ಖಾನಾಪುರದ ಹೆಸರು ಸೇರ್ಪಡೆಯಾಗಿರುವುದರಿಂದ ರೈತರಿಗೆ ಬರ ಪರಿಹಾರ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುವ ನಿರೀಕ್ಷೆ ಹೆಚ್ಚಾಗಿದೆ.