ರಸ್ತೆ ಅಪಘಾತ: ಗಾಯಾಳುವನ್ನ ಆಸ್ಪತ್ರೆಗೆ ಕರೆದೊಯ್ದು ವೈದ್ಯೋಪಚಾರ ನೀಡಿದ ಡಾ.ಅಂಜಲಿ!
- यल्लापूर : एकीकडे प्रचाराचा ताण असताना रात्रीच्या वेळी रस्त्याच्या कडेला दुचाकीवरून घसरून जखमी अवस्थेत विव्हळणाऱ्या एका तरुणाला उपचारासाठी दवाखान्यात वैद्यकीय उपचार करून एकाला जीवदान देणारी मदत उत्तर कन्नड लोकसभा मतदारसंघातील काँग्रेसच्या उमेदवार डॉ.अंजली निंबाळकर यांनी दाखवली आहे.
- हलियाल प्रचार आटोपून रात्री शिरसीला जात असताना यल्लापूर-शिर्सी महामार्गावर दुचाकी चालक विनायक शेट्टर घसरून रस्त्याकडेला विवळत पडला होता. रात्रीच्या अंधारात सदर युवक बेसूदावस्थेत असल्याचे डॉक्टर अंजलीताई निंबाळकर यांना निदर्शनाला आले. त्यांनी तातडीने आपल्या चालकाला आपले वाहन थांबून त्या दुचाकी स्वर्गाची चौकशी केली व आपल्या वाहनात असलेल्या प्राथमिक औषधावर करून अधिक उपचारासाठी त्याला आपल्याच वाहनातून शिरसी यथील शासकीय रुग्णालयात आणून तेथेच स्वतःही उपचार करून एक माणुसकीपणा दाखवला आहे.
- दुचाकीस्वाराच्या हाताला व पायाला गंभीर दुखापत झाली, त्यांनी जखमींना धीर दिला व वैद्यकीय पथकासह त्यांनी माणुसकी दाखवून दुचाकीस्वाराचे प्राण वाचविण्यास मदत केली.
ಯಲ್ಲಾಪುರ: ತಾಲೂಕಿನ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಷ್ಟೇ ಅಲ್ಲದೇ, ಖುದ್ದು ವೈದ್ಯೋಪಚಾರವನ್ನೂ ನೀಡುವ ಮೂಲಕ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.
ಹಳಿಯಾಳದಲ್ಲಿ ಪ್ರಚಾರ ಕಾರ್ಯ ಮುಗಿಸಿ ರಾತ್ರಿ ಶಿರಸಿಗೆ ತೆರಳುವ ಸಂದರ್ಭದಲ್ಲಿ ಯಲ್ಲಾಪುರ- ಶಿರಸಿ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ವಿನಾಯಕ ಶೆಟ್ಟರ್ ಎನ್ನುವಾತ ರಸ್ತೆಯಲ್ಲೇ ಗಾಯದ ನೋವಿನಿಂದಾಗಿ ಪ್ರಜ್ಞೆ ತಪ್ಪಿದ್ದ. ರಸ್ತೆ ಬದಿಯಲ್ಲಿ ವ್ಯಕ್ತಿ ಬಿದ್ದಿರುವುದನ್ನ ಕಂಡು ಕಾರು ನಿಲ್ಲಿಸಿದ ಡಾ.ಅಂಜಲಿ, ಗಾಯಾಳುವನ್ನ ಪರೀಕ್ಷಿಸಿ ತಕ್ಷಣ ತಮ್ಮದೇ ಕಾರಿನಲ್ಲಿ ಶಿರಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶಿರಸಿಯ ಪಂಡಿತ್ ಸರ್ಕಾರಿ ಆಸ್ಪತ್ರೆಗೆ ಗಾಯಾಳುವನ್ನ ದಾಖಲಿಸಿದ ಡಾ.ಅಂಜಲಿ, ಖುದ್ದು ವೈದ್ಯರಾಗಿ ವೈದ್ಯೋಪಚಾರವನ್ನೂ ನೀಡಿದ್ದಾರೆ.
ಬೈಕ್ ಸವಾರನ ಕೈ ಹಾಗೂ ಕಾಲಿಗೆ ಗಂಭೀರ ಗಾಯಳಾಗಿದ್ದು, ಗಾಯಾಳುವಿಗೆ ಧೈರ್ಯ ತುಂಬಿ ವೈದ್ಯಕೀಯ ತಂಡದೊಂದಿಗೆ ತಾವೂ ತುರ್ತು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದು ಬೈಕ್ ಸವಾರನ ಜೀವ ಉಳಿಸುವಲ್ಲಿ ನೆರವಾಗಿದ್ದಾರೆ.