IMG-20230815-WA0650

खानापूर लाईव्ह न्युज /प्रतिनिधी:

खानापूर तालुक्यात यावर्षी महात्मा गांधी राष्ट्रीय रोजगार हमी योजनेअंतर्गत आठ तलावांच्या बांधावर विकसित करण्यात आलेल्या अमृत सरोवर योजनेअंतर्गत भारतीय स्वातंत्र्य दिन उत्सव मंगळवारी साजरा करण्यात आला खानापूर तालुक्यातील शिंदोळी, कक्केरी, लिंगनमठ, गर्लगुंजी मनतुर्गा, इटगी, हलकरणी ग्रामपंचायतीच्या वतीने हा विशेष उपक्रम राबवण्यात आला आहे.
8 गावांमध्ये महात्मा गांधी राष्ट्रीय रोजगार हमीसह
प्रकल्पांतर्गत विकसित झालेल्या अमृत सरोवर तलावाच्या परिसरात स्वातंत्र्याचे अमृत
या उत्सवाचा एक भाग म्हणून मंगळवारी राष्ट्रध्वज फडकवण्यात आला.


कक्करी अमृता सरोवरच्या आवारात जिल्हा पंचायत नियोजन संचालक रवी बांगरेप्पनवर, यानी ,शिंदोळी येथे अमृत सरोवर परिसरात माजी सैनिक सुहास पाटील यांच्या हस्ते ध्वजारोहण करण्यात आले. इतरत्र संबंधित ग्रामपंचायत अंतर्गत
माजी सैनिकांच्या हस्ते ध्वजारोहण करण्यात आले. नंतर ग्रामपंचायतींच्या वतीने माजी सैनिकांचा सत्कार करण्यात आला. वीरांच्या सन्मानार्थ अमृता तलाव
निमंत्रितांनी तलावाच्या सभोवतालच्या भिंतीमध्ये दगडी फलकांचे अनावरण केले. रोपे लावून अमृत वाटिकेच्या उभारणीचा शुभारंभ करण्यात आला.
त्याच निमित्ताने माझी माती माझा देश अभियानाचा एक भाग म्हणून सरोवर परिसरात प्रतिज्ञापत्र घेण्यात आले तसेच अमृता कलशात माती गोळा केली.
कार्यक्रमात तालुका पंचायत ईओ वीराणा गौडा एगन गौडा, नरेगा सहाय्यक संचालक शेखर हिरेसोमनवर, लिंगानमठ ग्रामपंचायत अध्यक्ष कासीम हट्ट्होळी, शिंदोली ग्रामपंचायत सभापती प्रतीक्षा कार्लेकर, पी.डी.ओ.प्रभाकर भट, संजीव बोंगाळे, तांत्रिक समन्वयक मुरुगेश यक्कांची,आय.ई.सी.
समन्वयक महांतेश जांगटी यांच्यासह संबंधित ग्रामपंचायतींचे अध्यक्ष, उपाध्यक्ष, सदस्य, कर्मचारी, शिक्षक, मुले, नरेगा लाभार्थी ग्रामस्थ उपस्थित होते.

ಖಾನಾಪುರ ತಾಲ್ಲೂಕಿನ 8 ಅಮೃತ ಸರೋವರ ಆವರಣಗಳಲ್ಲಿ ರಾಷ್ಟ್ರ ಧ್ವಜಾರೋಹನ
ಖಾನಾಪುರ: ತಾಲ್ಲೂಕಿನ ಕಕ್ಕೇರಿ, ಲಿಂಗನಮಠ, ಗರ್ಲಗುಂಜಿ, ಮಂತುರ್ಗಾ, ಶಿಂಧೊಳ್ಳಿ
ಸೇರಿದಂತೆ 8 ಗ್ರಾಮಗಳ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ
ಯೋಜನೆಯಡಿ ಅಭಿವೃದ್ಧಿಗೊಂಡ ಅಮೃತ ಸರೋವರ ಕೆರೆಗಳ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಲಾಯಿತು.
ಕಕ್ಕೇರಿ ಅಮೃತ ಸರೋವರದ ಆವರಣದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ
ಬಂಗಾರೆಪ್ಪನವರ, ಶಿಂಧೊಳ್ಳಿ ಅಮೃತ ಸರೋವರದ ಆವರಣದಲ್ಲಿ ಮಾಜಿ ಸೈನಿಕ ಸುಹಾಸ ಪಾಟೀಲ
ಧ್ವಜಾರೋಹಣ ನೆರವೇರಿಸಿದರು. ಉಳಿದೆಡೆಗಳಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ
ಮಾಜಿ ಸೈನಿಕರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಗ್ರಾಮ ಪಂಚಾಯ್ತಿಗಳ ವತಿಯಿಂದ
ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ವೀರಯೋಧರ ಗೌರವಾರ್ಥವಾಗಿ ಅಮೃತ ಸರೋವರಗಳ ಆವರಣದಲ್ಲಿ ಶಿಲಾಫಲಕಗಳನ್ನು ಅನಾವರಣಗೊಳಿಸಿ ಆಹ್ವಾನಿತರಿಂದ ಸರೋವರದ ಸುತ್ತಮುತ್ತ ಸಸಿ ನೆಡುವ ಮೂಲಕ ಅಮೃತ ವಾಟಿಕಾ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸರೋವರದ ಆವರಣದಲ್ಲಿ ನನ್ನ ನೆಲ ನನ್ನ ದೇಶ ಅಭಿಯಾನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಅಮೃತ ಕಲಶದಲ್ಲಿ ಮಣ್ಣು ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ ಇಒ ವೀರನಗೌಡ ಏಗನಗೌಡರ, ನರೇಗಾ ಸಹಾಯಕ
ನಿರ್ದೇಶಕ ಶೇಖರ ಹಿರೇಸೋಮಣ್ಣವರ, ಲಿಂಗನಮಠ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಾಸೀಂ ಹಟ್ಟಿಹೊಳಿ, ಶಿಂಧೊಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರತಿಕ್ಷಾ ಕಾರ್ಲೇಕರ, ಪಿಡಿಒ ಪ್ರಭಾಕರ ಭಟ್, ಸಂಜೀವ ಬೊಂಗಾಳೆ, ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚಿ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ ಸೇರಿದಂತೆ ಆಯಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಶಿಕ್ಷಕರು, ಮಕ್ಕಳು, ನರೇಗಾ ಫಲಾನುಭವಿಗಳು
ಹಾಗೂ ಗ್ರಾಮಸ್ಥರು ಹಾಜರಿದ್ದರು.

Do Share

Leave a Reply

Your email address will not be published. Required fields are marked *

error: Content is protected !!
Call Us