ಖಾನಾಪುರ: ಇಂದಿನ ಹೈಬ್ರಿಡ್ ಯುಗದಲ್ಲಿ ರೋಗಮುಕ್ತ ಮತ್ತು ಆರೋಗ್ಯಯುತ ಜೀವನಕ್ಕೆ
ಸಿರಿಧಾನ್ಯಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಅಗತ್ಯವಾಗಿದೆ ಎಂದು ಶ್ರೀ
ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿರಿಧಾನ್ಯಗಳ ವಿತರಕ ಪ್ರಸನ್ನ ಕುಲಕಣರ್ಿ
ಅಭಿಪ್ರಾಯ ಪಟ್ಟರು.
ಪಟ್ಟಣದ ಜ್ಞಾನೇಶ್ವರ ದೇವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಸಂಘದ
ಸಭೆಯಲ್ಲಿ ತಾಲೂಕಿನ ಹಿರಿಯ ನಾಗರಿಕರಿಗೆ ಸಿರಿಧಾನ್ಯಗಳ ಮಹತ್ವವನ್ನು ವಿವರಿಸಿದ
ಅವರು, ವಿಶ್ವಸಂಸ್ಥೆ ಈ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು
ಘೋಷಿಸಿದೆ. ಸಣ್ಣ ಬೀಜದ ಹುಲ್ಲಿನಿಂದ ಬೆಳೆದ ಬರಗು, ಹಾರಕ, ನವಣೆ, ಸಾವೆ, ಊದಲು,
ಕೊರಲೆ, ಸಜ್ಜೆ, ರಾಗಿ ಮತ್ತಿತರ ಏಕದಳ ಧಾನ್ಯಗಳನ್ನು ಸಿರಿಧಾನ್ಯಗಳೆಂದು
ಗುರುತಿಸಲಾಗಿದೆ. ಇವುಗಳನ್ನು ನಿಯಮಿತವಾಗಿ ಸೇವಿಸಿದರೆ ರೋಗ ನಿರೋಧಕ ಶಕ್ತಿಯನ್ನು
ವೃದ್ಧಿಸುತ್ತವೆ ಎಂದು ವಿವರಿಸಿದರು.
ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಎಂ ಬನೋಶಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಪ್ರಸನ್ನ ದೇಶಪಾಂಡೆ, ಅಪ್ಪಾಸಾಹೇಬ ದಳವಿ, ಆರ್.ಸಿ ಸಾವಂತ, ಪ್ರಕಾಶ
ಕಾದ್ರೊಳ್ಳಿ, ಎಸ್.ಎಸ್ ಜಿಗಜಿನ್ನಿ, ಎನ್.ಜಿ ದೇಶಪಾಂಡೆ, ಎ.ಎಂ ಬೋಜರ್ಿಸ್, ಡಿ.ಎಂ
ಭೋಸಲೆ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು. ಸಂಘದ ಕಾರ್ಯದಶರ್ಿ
ಸಿ.ಎಸ್ ಪವಾರ ಸ್ವಾಗತಿಸಿದರು. ಖಜಾಂಚಿ ಎಂ.ಜಿ ಬೆನಕಟ್ಟಿ ವಂದಿಸಿದರು.