खानापूरसह आणखी नऊ तालुके दुष्काळग्रस्त घोषित!ಖಾನಾಪುರ ಮತ್ತು ಇತರ ಒಂಬತ್ತು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ!
खानापूरसह आणखी नऊ तालुके दुष्काळग्रस्त घोषित!
डॉ. जी. परमेश्वर यांची माहिती; अंतिम अहवाल आठवडाभरात, केंद्राकडून अधिक मदतीसाठी प्रयत्न
बंगळूर : राज्यातील दुष्काळी परिस्थितीच्या पार्श्वभूमीवर खानापूरसह आणखी नऊ तालुक्यांना दुष्काळग्रस्त घोषित करण्यात आले आहे. राज्याचे उपमुख्यमंत्री तथा महसूलमंत्री डॉ. जी. परमेश्वर यांनी बुधवारी (ता. १४) ही माहिती दिली. दुष्काळामुळे झालेल्या नुकसानीचा अंतिम अहवाल तयार करण्याचे काम सुरू असून, ही प्रक्रिया आणखी आठवडाभरात पूर्ण होण्याची शक्यता आहे.
राज्यातील दुष्काळग्रस्त तालुक्यांची संख्या आता २२६ होणार असल्याची माहिती डॉ. परमेश्वर यांनी दिली. दुष्काळग्रस्त भागातील शेतकऱ्यांना अधिक मदत मिळवून देण्यासाठी राज्य सरकार केंद्राकडे पाठपुरावा करणार असल्याचेही त्यांनी स्पष्ट केले.
आठवडाभरात अंतिम अहवाल
दुष्काळामुळे झालेल्या नुकसानीचे मूल्यांकन करण्यासाठी प्रशासनाकडून अंतिम अहवाल तयार केला जात आहे. हा अहवाल तयार झाल्यानंतर मुख्यमंत्री, उपमुख्यमंत्री आणि संबंधित मंत्र्यांच्या उपस्थितीत त्यावर चर्चा होणार आहे. त्यानंतर दिल्ली येथे होणाऱ्या बैठकीत दुष्काळग्रस्त भागांसाठी अधिक मदतीची मागणी करण्यात येणार असल्याचे परमेश्वर यांनी सांगितले.
केंद्राकडे मदतीसाठी पाठपुरावा
दुष्काळग्रस्त तालुक्यांना मदत देण्यासाठी राष्ट्रीय आपत्ती प्रतिसाद निधीच्या (NDRF) मार्गदर्शक तत्त्वांनुसार कार्यवाही केली जाणार आहे. गेल्या वर्षी राज्याने सुमारे १८ हजार कोटी रुपयांच्या मदतीची मागणी केली होती. यंदाही राज्यातील दुष्काळी परिस्थिती लक्षात घेऊन केंद्राकडे अधिक मदतीची मागणी करण्यात येणार आहे.
यासंदर्भात मुख्यमंत्री डी के शिवकुमार यांनी केंद्र सरकारला पत्र लिहिले असून, केंद्रीय कृषिमंत्र्यांचे पत्रही प्राप्त झाले आहे. केंद्राकडून सकारात्मक प्रतिसाद मिळेल, अशी अपेक्षा परमेश्वर यांनी व्यक्त केली.
खानापूर तालुक्यातील शेतकऱ्यांच्या अपेक्षा वाढल्या
खानापूर तालुक्यातील शेतकरी पावसाच्या अनियमिततेमुळे आणि पिकांच्या नुकसानीमुळे अडचणीत आहेत. तालुक्याचा दुष्काळग्रस्त यादीत समावेश झाल्याने शेतकऱ्यांना आर्थिक मदत, पीकनुकसान भरपाई आणि इतर सवलती मिळण्याची अपेक्षा वाढली आहे.
आता अंतिम अहवालानंतर केंद्र सरकारकडून किती मदत मिळते आणि त्याचा खानापूर तालुक्यातील शेतकऱ्यांना किती लाभ होतो, याकडे सर्वांचे लक्ष लागले आहे.
ಖಾನಾಪುರ ಸೇರಿದಂತೆ ರಾಜ್ಯದ ಇನ್ನೂ 9 ತಾಲೂಕುಗಳು ಬರಪೀಡಿತ ಎಂದು ಘೋಷಣೆ!
ವಾರದೊಳಗೆ ಅಂತಿಮ ವರದಿ ಸಿದ್ಧತೆ; ಕೇಂದ್ರದಿಂದ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನ: ಡಾ. ಜಿ. ಪರಮೇಶ್ವರ
ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಖಾನಾಪುರ ಸೇರಿದಂತೆ ಇನ್ನೂ ಒಂಬತ್ತು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಬುಧವಾರ (ಅ. 14) ಈ ಮಾಹಿತಿ ನೀಡಿದ್ದಾರೆ.
ಬರದಿಂದ ಉಂಟಾಗಿರುವ ಬೆಳೆ ಹಾಗೂ ಇತರ ನಷ್ಟಗಳ ಕುರಿತು ಅಂತಿಮ ವರದಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆ ಇನ್ನೊಂದು ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಲಿದೆ ಎಂದು ಪರಮೇಶ್ವರ ಮಾಹಿತಿ ನೀಡಿದ್ದಾರೆ. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುವುದಾಗಿಯೂ ಅವರು ಹೇಳಿದ್ದಾರೆ.
ವಾರದೊಳಗೆ ಅಂತಿಮ ವರದಿ
ಬರದಿಂದ ಉಂಟಾಗಿರುವ ನಷ್ಟದ ಮೌಲ್ಯಮಾಪನಕ್ಕಾಗಿ ಅಧಿಕಾರಿಗಳು ಅಂತಿಮ ವರದಿ ಸಿದ್ಧಪಡಿಸುತ್ತಿದ್ದಾರೆ. ವರದಿ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ನಂತರ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಬರಪೀಡಿತ ಪ್ರದೇಶಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪರಮೇಶ್ವರ ತಿಳಿಸಿದ್ದಾರೆ.
ಕೇಂದ್ರದಿಂದ ಹೆಚ್ಚಿನ ನೆರವಿಗೆ ಮನವಿ
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ರಾಜ್ಯ ಸರ್ಕಾರವು ಸುಮಾರು 18 ಸಾವಿರ ಕೋಟಿ ರೂಪಾಯಿ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಿತ್ತು. ಈ ಬಾರಿಯೂ ರಾಜ್ಯದ ಬರ ಪರಿಸ್ಥಿತಿಯನ್ನು ಪರಿಗಣಿಸಿ ಕೇಂದ್ರದಿಂದ ಹೆಚ್ಚಿನ ನೆರವು ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ D k shivakumar ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಕೃಷಿ ಸಚಿವರಿಂದಲೂ ಪತ್ರ ಬಂದಿದೆ ಎಂದು ಪರಮೇಶ್ವರ ಹೇಳಿದ್ದಾರೆ.
ಖಾನಾಪುರ ರೈತರಲ್ಲಿ ಪರಿಹಾರದ ನಿರೀಕ್ಷೆ
ಖಾನಾಪುರ ತಾಲೂಕಿನಲ್ಲಿ ಮಳೆಯ ಅನಿಶ್ಚಿತತೆ ಹಾಗೂ ಬೆಳೆ ನಷ್ಟದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುವ ನಿರೀಕ್ಷೆ ಹೆಚ್ಚಾಗಿದೆ.
ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಕೇಂದ್ರ ಸರ್ಕಾರ ಎಷ್ಟು ಪರಿಹಾರ ಮಂಜೂರು ಮಾಡಲಿದೆ ಮತ್ತು ಖಾನಾಪುರ ತಾಲೂಕಿನ ರೈತರಿಗೆ ಎಷ್ಟು ನೆರವು ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.