Khanapur : ज्ञानेश कुमार यांच्या राजीनाम्यासाठी खानापुरात काँग्रेसचा एल्गार!ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಖಾನಾಪುರದಲ್ಲಿ ಕಾಂಗ್ರೆಸ್ನಿಂದ ತೀವ್ರ ಪ್ರತಿಭಟನೆ!
oplus_4195328
ज्ञानेश कुमार यांच्या राजीनाम्यासाठी खानापुरात काँग्रेसचा एल्गार!
एसआयआर प्रक्रिया रद्द करण्याची मागणी; डॉ. अंजली निंबाळकर यांच्या नेतृत्वाखाली शिवस्मारक चौकात धरणे आंदोलन
खानापूर | प्रतिनिधी
मुख्य निवडणूक आयुक्त ज्ञानेश कुमार यांच्या राजीनाम्याच्या मागणीसाठी खानापूर तालुका ब्लॉक काँग्रेसच्या वतीने बुधवारी (दि. १४ ऑक्टोबर) खानापुरात तीव्र आंदोलन करण्यात आले. माजी आमदार तथा अखिल भारतीय काँग्रेस कमिटीच्या (AICC) सचिव डॉ. अंजली हेमंत निंबाळकर यांच्या नेतृत्वाखाली झालेल्या या आंदोलनात काँग्रेस पदाधिकारी व कार्यकर्त्यांनी सहभाग घेतला. यावेळी निवडणूक प्रक्रियेतील कथित अनियमितता आणि एसआयआर (विशेष सखोल मतदार यादी पुनरीक्षण) प्रक्रिया रद्द करण्याची मागणी करण्यात आली.
भाजपवर डॉ. अंजली निंबाळकर यांची टीका
खानापूर तालुका काँग्रेसच्या वतीने आयोजित आंदोलनादरम्यान तहसीलदारांना निवेदन सादर करण्यात आले. यावेळी डॉ. अंजली निंबाळकर यांनी भाजपवर टीका करत मुख्य निवडणूक आयुक्त ज्ञानेश कुमार यांच्या राजीनाम्याची मागणी केली. तसेच पंतप्रधान नरेंद्र मोदी आणि केंद्रीय गृहमंत्री अमित शहा यांनीही राजीनामा द्यावा, अशी मागणी त्यांनी केली.
मतचोरीचा आरोप करत काँग्रेसने निवडणूक प्रक्रियेवर प्रश्न उपस्थित केले. कायमस्वरूपी सत्तेत राहण्यासाठी भाजपकडून कथितरीत्या अशा प्रकारच्या धोरणांचा अवलंब केला जात असल्याचा आरोप डॉ. निंबाळकर यांनी केला. देशभरात राबविण्यात येणारी एसआयआर प्रक्रिया तातडीने रद्द करावी आणि मुख्य निवडणूक आयुक्त ज्ञानेश कुमार यांचा राजीनामा घ्यावा, अशी मागणी काँग्रेसच्या वतीने करण्यात आली.
महापुरुषांना अभिवादन करून आंदोलनाला सुरुवात
या आंदोलनाची सुरुवात जांबोटी क्रॉस येथील बसवेश्वर चौकातून करण्यात आली. प्रारंभी बसवेश्वर महाराजांच्या पुतळ्याला माल्यार्पण करून अभिवादन करण्यात आले. त्यानंतर नगरपंचायतीच्या उद्यानातील डॉ. बाबासाहेब आंबेडकर यांच्या पुतळ्याला पुष्पहार अर्पण करून अभिवादन करण्यात आले.
यानंतर मोर्चा शिवस्मारक चौकात दाखल झाला. तेथे छत्रपती शिवाजी महाराजांच्या पुतळ्याला अभिवादन करण्यात आले. त्यानंतर राजा छत्रपती चौकात मुख्य निवडणूक आयुक्त ज्ञानेश कुमार यांच्या राजीनाम्याच्या मागणीसाठी आंदोलन करण्यात आले.
तहसीलदारांना निवेदन सादर
आंदोलनानंतर काँग्रेसच्या पदाधिकाऱ्यांनी तहसीलदार कार्यालयावर मोर्चा नेऊन निवेदन सादर केले. निवेदनाद्वारे एसआयआर प्रक्रिया रद्द करणे, मुख्य निवडणूक आयुक्त ज्ञानेश कुमार यांचा राजीनामा घेणे आणि निवडणूक प्रक्रियेतील कथित अनियमिततेची दखल घेणे, अशा मागण्या करण्यात आल्या.
काँग्रेस पदाधिकारी व कार्यकर्त्यांचा सहभाग
या आंदोलनावेळी खानापूर तालुका ब्लॉक काँग्रेसचे अध्यक्ष आर. आर. घाडी, महंतेश राऊत, लक्ष्मण मादार, महादेव कोळी, सुरेश जाधव, सूर्यकांत कुलकर्णी, तोहीत चांदनावर, सावित्री मादार, वैष्णवी पाटील, ईश्वर बोबाटे, प्रमोद सुतार, चंबाना होसमणी, सखुबाई पाटील, गुड्डू टेकडी यांच्यासह काँग्रेसचे पदाधिकारी व कार्यकर्ते उपस्थित होते.खानापूर तालुक्यातील काँग्रेस पदाधिकारी आणि कार्यकर्त्यांनी मोठ्या संख्येने आंदोलनात सहभागी व्हावे, असे आवाहन पक्षाच्या वतीने करण्यात आले होते.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಖಾನಾಪುರದಲ್ಲಿ ಕಾಂಗ್ರೆಸ್ ಹೋರಾಟ!
ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸಲು ಒತ್ತಾಯ; ಡಾ. ಅಂಜಲಿತಾಯಿ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ
ಖಾನಾಪುರ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ (ಅ. 14) ಖಾನಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು. ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗುತ್ತಿರುವ ಎಸ್ಐಆರ್ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಬಿಜೆಪಿ ವಿರುದ್ಧ ಡಾ. ಅಂಜಲಿತಾಯಿ ವಾಗ್ದಾಳಿ
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಡಾ. ಅಂಜಲಿತಾಯಿ ನಿಂಬಾಳ್ಕರ್ ಅವರು, ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಪ್ರಶ್ನೆಗಳನ್ನು ಎತ್ತಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಮತಗಳ್ಳತನದ ಆರೋಪ ಮಾಡಿದ ಅವರು, ಅಧಿಕಾರದಲ್ಲಿ ನಿರಂತರವಾಗಿ ಮುಂದುವರಿಯಲು ಬಿಜೆಪಿ ಇಂತಹ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ದೇಶಾದ್ಯಂತ ಜಾರಿಗೊಳಿಸಲಾಗುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಮಹಾಪುರುಷರಿಗೆ ಗೌರವ ಸಲ್ಲಿಸಿ ಪ್ರತಿಭಟನೆ ಆರಂಭ
ಖಾನಾಪುರ ತಾಲೂಕಿನ ಜಾಂಬೋಟಿ ಕ್ರಾಸ್ನ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಆರಂಭದಲ್ಲಿ ಬಸವೇಶ್ವರ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ನಂತರ ಖಾನಾಪುರ ಪಟ್ಟಣ ಪಂಚಾಯಿತಿಯ ಉದ್ಯಾನವನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಶಿವಸ್ಮಾರಕ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಗೌರವ ಸಲ್ಲಿಸಿದರು.
ತದನಂತರ ರಾಜಾ ಛತ್ರಪತಿ ವೃತ್ತದಲ್ಲಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ತಹಶೀಲ್ದಾರರಿಗೆ ಮನವಿ ಸಲ್ಲಿಕೆ
ಪ್ರತಿಭಟನೆಯ ಬಳಿಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಭಾಗಿ
ಈ ಸಂದರ್ಭದಲ್ಲಿ ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಆರ್. ಘಾಡಿ, ಮಹಾಂತೇಶ ರಾವತ್, ಲಕ್ಷ್ಮಣ ಮಾದಾರ, ಮಹಾದೇವ ಕೋಳಿ, ಸೂರ್ಯಕಾಂತ ಕುಲಕರ್ಣಿ, ತೋಹಿತ್ ಚಾಂದನವರ್, ಸಾವಿತ್ರಿ ಮಾದಾರ, ವೈಷ್ಣವಿ ಪಾಟೀಲ, ಈಶ್ವರ ಬೋಭಾಟೆ, ಪ್ರಮೋದ್ ಸುತಾರ, ಚಂಬಣ್ಣ ಹೊಸಮನಿ, ಸಖುಬಾಯಿ ಪಾಟೀಲ, ಗುಡ್ಡು ಟೆಕಡಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಖಾನಾಪುರ ತಾಲೂಕಿನ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪಕ್ಷದ ಮುಖಂಡರು ಕರೆ ನೀಡಿದ್ದರು.