Home » कर्नाटक राज्य माध्यमिक शिक्षक संघाच्या बेळगाव जिल्हाध्यक्षपदी एस. जी. चिगुळकरಎಸ್. ಜಿ. ಚಿಗುಳ್ಕರ್ ಅವರು ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

कर्नाटक राज्य माध्यमिक शिक्षक संघाच्या बेळगाव जिल्हाध्यक्षपदी एस. जी. चिगुळकरಎಸ್. ಜಿ. ಚಿಗುಳ್ಕರ್ ಅವರು ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Screenshot_2026-10-01-22-36-15-97_96b26121e545231a3c569311a54cda96

कर्नाटक राज्य माध्यमिक शिक्षक संघाच्या बेळगाव जिल्हाध्यक्षपदी एस. जी. चिगुळकर

एम. बी. अंगडी यांच्याकडे कार्यदर्शीपदाची जबाबदारी; राज्याध्यक्ष संदीप बुधियाळ यांच्या उपस्थितीत नूतन कार्यकारिणीचा पदग्रहण सोहळा

बेळगाव / प्रतिनिधी : कर्नाटक राज्य माध्यमिक शिक्षक संघ (र), बेंगळूरच्या बेळगाव जिल्हा घटकाची नूतन कार्यकारिणी जाहीर करण्यात आली. राज्याध्यक्ष संदीप बुधियाळ यांच्या प्रमुख उपस्थितीत टिळकवाडी येथील जी. जी. चिटणीस हायस्कूलमध्ये नूतन पदाधिकाऱ्यांचा पदग्रहण सोहळा उत्साहात पार पडला.

या निवडीत कणकुंबी हायस्कूलचे मुख्याध्यापक एस. जी. चिगुळकर यांची जिल्हाध्यक्षपदी, तर बेनस्मित हायस्कूलचे एम. बी. अंगडी यांची जिल्हा कार्यदर्शीपदी एकमताने निवड करण्यात आली. नूतन कार्यकारिणीच्या माध्यमातून जिल्ह्यातील माध्यमिक शिक्षकांच्या विविध प्रश्नांना संघटितपणे वाचा फोडण्याचा निर्धार यावेळी व्यक्त करण्यात आला.

कार्यक्रमाच्या प्रारंभी मान्यवरांच्या हस्ते सरस्वती पूजन व दीपप्रज्वलन करण्यात आले. जिल्हा प्रधान कार्यदर्शी उमेश कुलकर्णी यांनी प्रास्ताविकातून कार्यकारिणी निवडीची पार्श्वभूमी सांगत उपस्थितांचे स्वागत केले. अक्षता मोरे यांनी प्रार्थना सादर केली. त्यानंतर उमेश कुलकर्णी यांनी नूतन जिल्हा कार्यकारिणीची घोषणा केली.

राज्याध्यक्ष संदीप बुधियाळ, राज्य उपाध्यक्ष चिदानंद पाटील आणि राज्य सचिव आर. पी. वंटगुडी यांनी नूतन पदाधिकाऱ्यांचे पुष्पगुच्छ देऊन स्वागत केले.

नूतन कार्यकारिणी

जिल्हाध्यक्ष : एस. जी. चिगुळकर
कार्यदर्शी : एम. बी. अंगडी
सहकार्यदर्शी : पवन पाटील
उपाध्यक्ष : संजीव कोष्टी, बी. जी. हिरेमठ, नागेश डोणकरी, डॉ. नवीन शेट्टीगार
महिला प्रमुख : चंदा नरसगौडा
खजिनदार : जे. एम. पाटील
ऑर्गनायझिंग सेक्रेटरी : वसंत पाटील
जॉईंट ऑर्गनायझिंग सेक्रेटरी : विश्वास गावडे

जिल्हा डायरेक्टर : संजय पवार, सी. आय. पाटील, सिद्धाप्पा नाईक, महेश सडेकर, सचिन कुडची, वाय. के. पाटील, पी. ए. पाटील, एम. वाय. पाटील, बी. जी. पाटील, एन. डी. पाटील, जे. यू. घाडी.

सल्लागार : उमेश कुलकर्णी, विश्वजीत हसबे, दयानंद तारिहाळकर, राजाराम कुडतुरकर, अशोक परमोजी, अरुण पाटील, सुरेश कळ्ळेकर, एन. डी. पाटील, वामनराव कुलकर्णी, परशराम गोरल, पी. ओ. धामणेकर, एल. बी. नाईक, अनिल कदम व अशोक अण्णीगेरी.

यावेळी राज्याध्यक्ष संदीप बुधियाळ, राज्य उपाध्यक्ष चिदानंद पाटील तसेच नूतन जिल्हाध्यक्ष एस. जी. चिगुळकर यांनी मनोगत व्यक्त केले. कार्यक्रमाचे सूत्रसंचालन बी. जी. हिरेमठ यांनी केले, तर नूतन जिल्हा कार्यदर्शी एम. बी. अंगडी यांनी आभार मानले.

कार्यक्रमाला बेळगाव शहर, खानापूर तालुका, बेळगाव ग्रामीण यांसह जिल्ह्यातील विविध तालुक्यांमधील शिक्षक मोठ्या संख्येने उपस्थित होते.

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಎಸ್.ಜಿ. ಚಿಗುಳಕರ

ಎಂ.ಬಿ. ಅಂಗಡಿ ಅವರಿಗೆ ಕಾರ್ಯದರ್ಶಿ ಜವಾಬ್ದಾರಿ; ರಾಜ್ಯಾಧ್ಯಕ್ಷ ಸಂದೀಪ ಬುಧಿಯಾಳ್ ಉಪಸ್ಥಿತಿಯಲ್ಲಿ ನೂತನ ಜಿಲ್ಲಾ ಕಾರ್ಯಕಾರಿಣಿ ಪದಗ್ರಹಣ

ಬೆಳಗಾವಿ / ಪ್ರತಿನಿಧಿ : ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ (ರಿ.), ಬೆಂಗಳೂರಿನ ಬೆಳಗಾವಿ ಜಿಲ್ಲಾ ಘಟಕದ ನೂತನ ಕಾರ್ಯಕಾರಿಣಿಯನ್ನು ಘೋಷಿಸಲಾಗಿದ್ದು, ರಾಜ್ಯಾಧ್ಯಕ್ಷ ಸಂದೀಪ ಬುಧಿಯಾಳ್ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಬೆಳಗಾವಿಯ ಟಿಳಕವಾಡಿಯ ಜಿ.ಜಿ. ಚಿಟ್ನಿಸ್ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಣಕುಂಬಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಜಿ. ಚಿಗುಳಕರ ಅವರನ್ನು ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಬೆಳಗಾವಿಯ ಬೆನಸ್ಮಿತ್ ಪ್ರೌಢಶಾಲೆಯ ಎಂ.ಬಿ. ಅಂಗಡಿ ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಸರಸ್ವತಿ ಪೂಜೆ ಹಾಗೂ ದೀಪಪ್ರಜ್ವಲನೆ ನೆರವೇರಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಕುಲಕರ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಕಾರ್ಯಕಾರಿಣಿ ಆಯ್ಕೆ ಹಾಗೂ ಪದಗ್ರಹಣ ಸಮಾರಂಭದ ಕುರಿತು ಮಾಹಿತಿ ನೀಡಿದರು. ಅಕ್ಷತಾ ಮೋರೆ ಪ್ರಾರ್ಥನೆ ಸಲ್ಲಿಸಿದರು.

ನಂತರ ಉಮೇಶ ಕುಲಕರ್ಣಿ ಅವರು ನೂತನ ಜಿಲ್ಲಾ ಕಾರ್ಯಕಾರಿಣಿಯ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸಿದರು. ರಾಜ್ಯಾಧ್ಯಕ್ಷ ಸಂದೀಪ ಬುಧಿಯಾಳ್, ರಾಜ್ಯ ಉಪಾಧ್ಯಕ್ಷ ಚಿದಾನಂದ ಪಾಟೀಲ ಹಾಗೂ ರಾಜ್ಯ ಕಾರ್ಯದರ್ಶಿ ಆರ್.ಪಿ. ವಂಟಗುಡಿ ಅವರು ನೂತನ ಪದಾಧಿಕಾರಿಗಳನ್ನು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ನೂತನ ಜಿಲ್ಲಾ ಕಾರ್ಯಕಾರಿಣಿ

ಅಧ್ಯಕ್ಷರು: ಎಸ್.ಜಿ. ಚಿಗುಳಕರ
ಕಾರ್ಯದರ್ಶಿ: ಎಂ.ಬಿ. ಅಂಗಡಿ
ಸಹ ಕಾರ್ಯದರ್ಶಿ: ಪವನ ಪಾಟೀಲ
ಉಪಾಧ್ಯಕ್ಷರು: ಸಂಜೀವ ಕೋಷ್ಟಿ, ಬಿ.ಜಿ. ಹಿರೇಮಠ, ನಾಗೇಶ ಡೋಣಕರಿ, ಡಾ. ನವೀನ ಶೆಟ್ಟಿಗಾರ
ಮಹಿಳಾ ಪ್ರಮುಖರು: ಚಂದಾ ನರಸಗೌಡ
ಖಜಾಂಚಿ: ಜೆ.ಎಂ. ಪಾಟೀಲ
ಆರ್ಗನೈಸಿಂಗ್ ಸೆಕ್ರೆಟರಿ: ವಸಂತ ಪಾಟೀಲ
ಜಾಯಿಂಟ್ ಆರ್ಗನೈಸಿಂಗ್ ಸೆಕ್ರೆಟರಿ: ವಿಶ್ವಾಸ ಗಾವಡೆ

ಜಿಲ್ಲಾ ನಿರ್ದೇಶಕರಾಗಿ ಸಂಜಯ ಪವಾರ, ಸಿ.ಐ. ಪಾಟೀಲ, ಸಿದ್ದಪ್ಪ ನಾಯ್ಕ, ಮಹೇಶ ಸಡೆಕರ, ಸಚಿನ್ ಕುಡಚಿ, ವೈ.ಕೆ. ಪಾಟೀಲ, ಪಿ.ಎ. ಪಾಟೀಲ, ಎಂ.ವೈ. ಪಾಟೀಲ, ಬಿ.ಜಿ. ಪಾಟೀಲ, ಎನ್.ಡಿ. ಪಾಟೀಲ ಹಾಗೂ ಜೆ.ಯು. ಘಾಡಿ ಅವರನ್ನು ನೇಮಕ ಮಾಡಲಾಗಿದೆ.

ಸಲಹೆಗಾರರಾಗಿ ಉಮೇಶ ಕುಲಕರ್ಣಿ, ವಿಶ್ವಜಿತ್ ಹಸಬೆ, ದಯಾನಂದ ತಾರಿಹಾಳಕರ, ರಾಜಾರಾಮ ಕುಡತುರಕರ, ಅಶೋಕ ಪರಮೋಜಿ, ಅರುಣ ಪಾಟೀಲ, ಸುರೇಶ ಕಳ್ಳೆಕರ, ಎನ್.ಡಿ. ಪಾಟೀಲ, ವಾಮನರಾವ್ ಕುಲಕರ್ಣಿ, ಪರಶರಾಮ್ ಗೋರಲ, ಪಿ.ಒ. ಧಾಮಣೆಕರ, ಎಲ್.ಬಿ. ನಾಯ್ಕ, ಅನಿಲ್ ಕದಂ ಹಾಗೂ ಅಶೋಕ ಅಣ್ಣಿಗೇರಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸಂದೀಪ ಬುಧಿಯಾಳ್, ರಾಜ್ಯ ಉಪಾಧ್ಯಕ್ಷ ಚಿದಾನಂದ ಪಾಟೀಲ ಹಾಗೂ ನೂತನ ಜಿಲ್ಲಾಧ್ಯಕ್ಷ ಎಸ್.ಜಿ. ಚಿಗುಳಕರ ಮಾತನಾಡಿದರು. ಬಿ.ಜಿ. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ನೂತನ ಜಿಲ್ಲಾ ಕಾರ್ಯದರ್ಶಿ ಎಂ.ಬಿ. ಅಂಗಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ನಗರ, ಖಾನಾಪುರ ತಾಲೂಕು, ಬೆಳಗಾವಿ ಗ್ರಾಮೀಣ ಸೇರಿದಂತೆ ವಿವಿಧ ತಾಲೂಕುಗಳ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Do Share

You may have missed

error: Content is protected !!
Call Us