कस्तुरीरंगन अहवालाला विरोध; दलित संघर्ष समितीकडून निवेदन ಕಸ್ತೂರಿರಂಗನ್ ವರದಿಗೆ ವಿರೋಧ; ದಲಿತ ಸಂಘರ್ಷ ಸಮಿತಿಯಿಂದ ಮನವಿ ಪತ್ರ ಸಲ್ಲಿಕೆ.
कस्तुरीरंगन अहवालाला विरोध; दलित संघर्ष समितीकडून निवेदन
खानापूर : पश्चिम घाटातील पर्यावरण संवेदनशील क्षेत्रात (ESA) समाविष्ट करण्यात आलेल्या खानापूर तालुक्यातील ६२ गावांना कस्तुरीरंगन अहवालातून वगळावे, अशी मागणी दलित संघर्ष समितीच्या वतीने करण्यात आली. यासंदर्भात समितीच्या पदाधिकाऱ्यांनी खानापूर तहसीलदार कार्यालयात निवेदन सादर केले.
कस्तुरीरंगन अहवालामुळे खानापूर तालुक्यातील अनेक गावांवर परिणाम होण्याची शक्यता असल्याचे समितीच्या पदाधिकाऱ्यांनी निवेदनात म्हटले आहे. या अहवालामुळे शेतकरी, सामान्य नागरिक, व्यावसायिक तसेच स्थानिक विकासकामांवर निर्बंध येण्याची भीती व्यक्त करण्यात आली.
खानापूर तालुक्यातील अनेक गावांमध्ये शेती व विविध व्यवसायांवर नागरिकांचे जीवनमान अवलंबून आहे. पर्यावरण संवर्धनासोबतच स्थानिक नागरिकांचे हक्क आणि त्यांच्या उपजीविकेचे संरक्षण होणे आवश्यक असल्याचे समितीने नमूद केले.
६२ गावांना ESA मधून वगळून स्थानिक नागरिकांना दिलासा द्यावा, तसेच या विषयावर शासनाने सकारात्मक निर्णय घ्यावा, अशी मागणी निवेदनाद्वारे करण्यात आली.
यावेळी दलित संघर्ष समितीचे तालुका अध्यक्ष राजशेखर चेलवादी, भीम आर्मी तालुका अध्यक्ष चेलवादी, मुमिंदराद शंकर भगनवाडकर, रवी मादार, संगिता कदम यांच्यासह कार्यकर्ते उपस्थित होते.
ಕಸ್ತೂರಿರಂಗನ್ ವರದಿಗೆ ವಿರೋಧ; 62 ಗ್ರಾಮಗಳನ್ನು ಕೈಬಿಡುವಂತೆ ದಲಿತ ಸಂಘರ್ಷ ಸಮಿತಿ ಮನವಿ
ಖಾನಾಪುರ : ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ (ESA) ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವ ಖಾನಾಪುರ ತಾಲೂಕಿನ 62 ಗ್ರಾಮಗಳನ್ನು ಕಸ್ತೂರಿರಂಗನ್ ವರದಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಖಾನಾಪುರ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ಕಸ್ತೂರಿರಂಗನ್ ವರದಿಯಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳ ಜನಜೀವನ, ಕೃಷಿ ಹಾಗೂ ಸ್ಥಳೀಯ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರೈತರು ಹಾಗೂ ಗ್ರಾಮಸ್ಥರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 62 ಗ್ರಾಮಗಳನ್ನು ESA ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯ ಜನರ ಭೂಮಿ, ಕೃಷಿ, ಜೀವನೋಪಾಯ ಮತ್ತು ಅಭಿವೃದ್ಧಿಯ ಹಕ್ಕುಗಳನ್ನು ರಕ್ಷಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸ್ಥಳೀಯರ ಅಭಿಪ್ರಾಯವನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರಾಜಶೇಖರ ಚಲವಾದಿ, ಭೀಮ ಆರ್ಮಿ ತಾಲೂಕು ಅಧ್ಯಕ್ಷ ಚಲವಾದಿ, ಮುಮಿಂದ್ರಾದ ಶಂಕರ ಭಗನವಾಡಕರ, ರವಿ ಮಾದಾರ, ಸಂಗೀತಾ ಕದಂ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.