ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2021-22 ನೇ ಸಾಲಿನ ಪರೀಕ್ಷೆಯ ಬಿ. ಕಾಂ ವಿಭಾಗದಲ್ಲಿ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಶ್ವೇತಾ ರುದ್ರಗೌಡ ಪಾಟೀಲ (ಶೇ.97.49)ಅಂಕಗಳೊಂದಿಗೆ ರಾಣಿ ಚನ್ನಮ್ಮ ವಿವಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಶ್ವೇತಾ ರುದ್ರಗೌಡ ಪಾಟೀಲ ಮೂಲತಃ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದವಳಾಗಿದ್ದು ಇವಳ ಸಾಧನೆಗೆ ಕುಟುಂಬ ಸದಸ್ಯರು, ಊರ ನಾಗರಿಕರು, ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಮಸ್ತ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.